ಎಲ್ಲರಿಗೂ ನಮಸ್ಕಾರ, ಬಿಮಾ ಸಖಿ ಯೋಜನೆಯ ಬಗ್ಗೆ ನಿಮಗೆ ತಿಳಿದಿದೆಯೇ..? ಯಾವುದು ಈ ಯೋಜನೆ..? ಈ ಯೋಜನೆಯ ಉದ್ದೇಶವೇನು..? ಯಾರು LIC Bima Sakhi Yojana ಗೆ ಅರ್ಹರು..? ಹಾಗೂ ವಯೋಮಿತಿ ಏನು..? ಅರ್ಹತಾ ಮಾನದಂಡಗಳೇನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹರಿಯಾಣದ ಪಾಣಿಪತ್‌ನಲ್ಲಿ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಿದರು. ಹತ್ತನೇ ತರಗತಿ ಪಾಸಾಗಿರುವ, 18 ರಿಂದ 70 ವರ್ಷ ವಯಸ್ಸಿನ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮಹಿಳೆಯರನ್ನು LIC ಏಜೆಂಟರಾಗಿ ಕೆಲಸ ಮಾಡಲು ತರಬೇತಿ ನೀಡಲಾಗುತ್ತದೆ.
ಮಹಿಳೆಯರ ಸ್ವಾವಲಂಬನೆ ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರಕಾರವು LIC ಬಿಮಾ ಸಖಿ (ವಿಮಾ ಸಖಿ) ಯೋಜನೆಗೆ ಚಾಲನೆ ನೀಡಿದೆ. ಮುಂದಿನ 3 ವರ್ಷಗಳಲ್ಲಿ ದೇಶಾದ್ಯಂತ 2 ಲಕ್ಷ ವಿಮಾ ಸಖಿಯರನ್ನು ನೇಮಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ.
ಬಿಮಾ ಸಖಿ ಯೋಜನೆ (LIC Bima Sakhi Scheme) ಮೂಲಕ ಮಹಿಳೆಯರ ನೇತೃತ್ವದಲ್ಲಿ ವಿಮಾ ವಲಯವು ವಿಸ್ತರಣೆಯಾಗಲಿದೆ. ಎಲ್‌ಐಸಿ ಏಜೆಂಟರುಗಳು ತಿಂಗಳಿಗೆ ಸರಾಸರಿ 15,000 ರೂ. ವರೆಗೂ ಸಂಪಾದಿಸಬಹುದು. ಈ ಯೋಜನೆಯು ಪ್ರತಿ ಕುಟುಂಬಕ್ಕೂ ಸಾಮಾಜಿಕ ಭದ್ರತೆ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಗ್ರಾಮೀಣ ಭಾಗದಲ್ಲಿ ವಿಮೆ ಯೋಜನೆಯು (LIC Bima Sakhi Kannada) ಹೆಚ್ಚು ಜನರನ್ನು ತಲುಪಿಲ್ಲ. ಈ ಕಾರಣಕ್ಕಾಗಿಯೇ ಹಳ್ಳಿ ಪ್ರದೇಶದ ಮಹಿಳೆಯರಿಗೆ ವಿಮಾ ತರಬೇತಿ ನೀಡಿ ಅವರನ್ನು ಎಲ್‌ಐಸಿ ಏಜೆಂಟರನ್ನಾಗಿ ಮಾಡಿ, ಅವರ ಮೂಲಕ ಹೆಚ್ಚು ಜನರಿಗೆ ವಿಮಾ ಸೌಲಭ್ಯ ತಲುಪಿಸುವ ಗುರಿಯನ್ನು ಸರಕಾರ ಹೊಂದಿದೆ.
ಬಿಮಾ ಸಖಿ ಯೋಜನೆಯಲ್ಲಿ ಮಹಿಳೆಯರಿಗೆ ವಿಮಾ ಯೋಜನೆಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ನಂತರ ಅವರನ್ನು ಎಲ್‌ಐಸಿ ಏಜೆಂಟರನ್ನಾಗಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯ ಮೊದಲ ಹಂತದಲ್ಲಿ 35 ಸಾವಿರ ಮಹಿಳೆಯರನ್ನು ವಿಮಾ ಸಖಿಯರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಹಾಗೂ ಮುಂದಿನ 3 ವರ್ಷಗಳಲ್ಲಿ 2 ಲಕ್ಷ ವಿಮಾ ಸಖಿಯರ ನೇಮಕ ಮಾಡಿಕೊಳ್ಳಲಾಗುತ್ತದೆ.
LIC Bima Sakhi Yojana ಅರ್ಹತಾ ಮಾನದಂಡಗಳು:
- 10th ಪಾಸಾದ 18 ರಿಂದ 70 ವರ್ಷ ವಯಸ್ಸಿನ ಎಲ್ಲಾ ಮಹಿಳೆಯರಿಗೂ ವಿಮಾ ಸಖಿಯರಾಗಲು ಅವಕಾಶವಿದೆ.
- ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಇರುತ್ತದೆ ಹಾಗೂ ಅವರ ಜೀವನಕ್ಕೊಂದು ಆದಾಯದ ಮಾರ್ಗವಾಗಲಿದೆ.
- 3 ವರ್ಷ ತರಬೇತಿ ನೀಡುತ್ತಾರೆ. ಮೊದಲ ವರ್ಷ ತಿಂಗಳಿಗೆ 7,000 ರೂ. ಎರಡನೇ ವರ್ಷ 6,000 ರೂ., ಮೂರನೇ ವರ್ಷ 5,000 ರೂ. ತರಬೇತಿ ಭತ್ಯೆ ಇರುತ್ತದೆ.
- ಇವರಿಗೆ ಕಮಿಷನ್ ಇರುತ್ತದೆ. ತರಬೇತಿ ಬಳಿಕ ಪದವೀಧರರಿಗೆ ಎಲ್‌ಐಸಿಯಲ್ಲಿ ಡೆವಲಪ್‌ಮೆಂಟ್ ಆಫೀಸರ್‌ಗಳಾಗುವ ಅವಕಾಶ ಲಭ್ಯವಿದೆ.
ಇತರೆ ಮಾಹಿತಿಗಳನ್ನು ಓದಿ:
Today Gold Rate: ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಗಮನಿಸಿ..?
Ration Card Correction 2024: ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರೀಯೆ ಆರಂಭ