ಎಲ್ಲರಿಗೂ ನಮಸ್ಕಾರ, ನೀವು ಕೂಡ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಲು ಕಾಯುತ್ತಿದ್ದೀರಾ..? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್, ಆಹಾರ ಇಲಾಖೆಯು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ (Ration Card Correction) ಮತ್ತೆ ಅವಕಾಶ ನೀಡಿದ್ದು, ಯಾರು ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ಕಾಯುತಿರುವವರು ನಿಗದಿಪಡಿಸಿರುವ ಸಮಯದ ಒಳಗಾಗಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿಯಲ್ಲಿ ಯಲ್ಲಿ ತಿದ್ದುಪಡಿಗೆ ಮತ್ತೆ ಕಾಲಾವಕಾಶ ನೀಡಿದೆ. ಇದುವರೆಗೂ ಯಾರು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಬೇಕು ಅಂತ ಕಾಯುತ್ತಿದ್ದೀರಾ ಅಂತವರು ಕೂಡಲೇ ಹೊಗಿ ತಿದ್ದುಪಡಿ ಮಾಡಿಸಿಕೊಳ್ಳಬಹುದು, ಹಾಗೂ ಸರ್ಕಾರವು ನೀಡಿರುವ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬಹುದು.
ರಾಜ್ಯದ ಎಲ್ಲಾ ಜಿಲ್ಲೆಯವರಿಗೂ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಅವಕಾಶ ನೀಡಿದ್ದು, ಸರ್ವರ್ ಓಪನ್ ಇದ್ದು ಯಾರು ತಮ್ಮ ರೇಷನ್ ಕಾರ್ಡ್ ನಲ್ಲಿ ತಿದ್ದಪಡಿ ಮಾಡಿಸಬೇಕು ಎಂದು ಕಾಯುತ್ತಿರುವವರು ತಿದ್ದುಪಡಿ ಮಾಡಿಸಿಕೊಳ್ಳಬಹುದು.
Ration Card Correction Karnataka 2024:
ರೇಷನ್ ಕಾರ್ಡ್ ನಲ್ಲಿ ಈ ಕೆಳಗಿನ ತಿದ್ದುಪಡಿ ಹಾಗೂ ಬದಲಾವಣೆಯನ್ನು ಮಾಡಿಸಿಕೊಳ್ಳಬಹುದು.
- ಮುಖ್ಯಸ್ಥರ ಬದಲಾವಣೆ
- ಸದಸ್ಯರ ಸೇರ್ಪಡೆ
- ಹೆಸರು ತಿದ್ದುಪಡಿ
- ಹೆಸರು ತೆಗೆಯುವುದು
- ಪೋಟೊ ಬದಲಾವಣೆ
- ಇ-ಕೆವೈಸಿ ಅಪ್ಡೇಟ್ ಹಾಗೂ ಇತರೆ ಸೇವೆಗಳು.
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ತಿದ್ದುಪಡಿಗೆ ಅವಕಾಶವಿದೆ.
ಎಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬೇಕು..?
ಯಾರು ತಮ್ಮ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (Ration Card Correction) ಮಾಡಿಸಿಕೊಳ್ಳಬೇಕು ಎಂದು ಕಾಯುತ್ತಿರುವವರು ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಿದ್ದಾರೆ.
ಇತರೆ ಮಾಹಿತಿಗಳನ್ನು ಓದಿ:
ಮಹಿಳೆಯರಿಗಾಗಿ ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿ, ತಿಂಗಳಿಗೆ 7,000 ರೂ.